Home
ದೇವದುರ್ಗ ಪಟ್ಟಣದ ಮುನ್ನೋಟ
· ದೇವದುರ್ಗ ಪಟ್ಟಣವು ಒಂದು ತಾಲೂಕು ಕೇಂದ್ರ ಸ್ಥಾನವಿದ್ದು ಪಟ್ಟಣದಲ್ಲಿ 2001 ನೇಯ ಸಾಲಿನ ಜನಗಣತಿಯ ಪ್ರಕಾರ 21306 ರಷ್ಟು ಜನ ಸಂಖ್ಯೆಯನ್ನು ಹಾಗೂ ಪ್ರಸ್ತುತ 2008 ರಲ್ಲಿ 25073 ಜನ ಸಂಖ್ಯೆಯನ್ನು ಮತ್ತು 2011ನೇಯ ಸಾಲಿನ ಜನಗಣತಿಯ ಪ್ರಕಾರ 28952 ಜನ ಸಂಖ್ಯೆಯನ್ನು ಹೊಂದಿರುತ್ತದೆ.
· ಹಲವಾರು ಬೆಟ್ಟ-ಗುಡ್ಡಗಳಿಂದ ಸೇರಿದ ಸುಂದರವಾದ ನಿಸರ್ಗದತ್ತ ಕೋಟೆ ಎಂಬಂತೆ ಭಾಸವಾಗುತ್ತದೆ . ಹಾಗೆಯೇ ಈ ಸುಂದರವಾದ ಬೆಟ್ಟಗಳ ಸುತ್ತ- ಮುತ್ತಲಿನ ಸ್ಥಳಗಳಲ್ಲಿ ದೇವಾಲಯಗಳ ಇರುವುದರಿಂದ ಈ ಪಟ್ಟಣಕ್ಕೆ ದೇವದತ್ತದುರ್ಗ ಅಥವಾ ದೇವದುರ್ಗ ಎಂಬ ಹೆಸರು ಬಂದಿತೆಂದು ಹಿರಿಯ ತಲೆ ಮಾರುಗಳಿಂದ ತಿಳಿದುಬಂದಿದೆ.
· 1 ಜನವರಿ 2007 ರಂದು ದೇವದುರ್ಗ ಪುರಸಭೆಯಾಗಿ ಪರಿವರ್ತನೆಗೊಂಡಿದೆ. ದೇವದುರ್ಗ ಪಟ್ಟಣವು 23 ವಾರ್ಡುಗಳನ್ನು ಒಳಗೊಂಡಿದ್ದು ಅದರ ಒಟ್ಟು ವಿಸ್ತರಣೆ 7.46 ಕಿ.ಮೀ ಹೊಂದಿರುತ್ತದೆ.
· ಇಲ್ಲಿಯ ಸರಾಸರಿ ಉಷ್ಣತಾಮಾಪನವು ಕನಿಷ್ಟ 360 C ರಿಂದ ಗರಿಷ್ಟ 460 C ರವರೆಗೆ ಇರುತ್ತದೆ.
· ಇಲ್ಲಿ ಪ್ರಮುಖವಾಗಿ ಸಜ್ಜಿ , ಜೋಳ, ಹತ್ತಿ , ಮೇಣಸೀನಕಾಯಿ ಮತ್ತು ಶೇಂಗಾ ಹಾಗೂ ಭತ್ತವನ್ನು ಬೆಳೆಯಲಾಗುತ್ತದೆ.
· ದೇವದುರ್ಗ ಪಟ್ಟಣವು ರಾಯಚೂರುನಿಂದ 57 ಕಿ.ಮೀ ದೂರದಲ್ಲಿದೆ.
BRIEF ABOUT DEVADURGA TMC
- The Town Municipal Council Devadurga was constituted in 2007.
- The town’s population as per 2011 census is 28952.
- The town has an area of 7.46 sq. kms.
- The town temperature varies from a maximum of 45˚C to a minimum of 36˚C and winter temperature of 25˚C toa minimum of 18˚C.
- The town Major connectivity by road from the district head quarters Raichur is 57 kms.
- Local magistrate court has been solving the public grievances for a period of 47 years.
- In Devadurga town more than 16 government offices are presently functioning.
- The Devadurga town has 12 Primary Schools, 9 High Schools, 5 Pre-University Colleges, 3 Degree Colleges, 1 Polytechnic College, 2 I.T.I. Colleges.
- The Devadurga TMC has 23 wards and equal number of councilors and 5 number of Nominated Councilors.
ಗಣಕೀಕರಣ ಯೋಜನೆಗಳು:
ಜನನ –ಮರಣ ಗಣಕೀಕರಣ (Birth and Death): ಪುರಸಭೆಯಲ್ಲಿ ಲಭ್ಯವಿರುವ 1998 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯ ವೆಬ್ ಸೈಟ್ ಮೂಲಕ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ.
ಸಾರ್ವಜನಿಕ ದೂರು ನಿವಾರಣಾ ಘಟಕ (Public Grievance Redressal Cell): ಸಾರ್ವಜನಿಕ ದೂರು ನಿವಾರಣಾ ಘಟಕವು ವಾರದ 7 ದಿನಗಳು ಹಾಗೂ ದಿನದ 12 ಗಂಟೆಗಳು ಕಾರ್ಯ ನಿರ್ವಹಿಸುತ್ತಿರುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು.
ದೂರವಾಣಿ ಸಂಖ್ಯೆ: 08531- 260087
ಆಸ್ತಿ ತೆರಿಗೆ ಯೋಜನೆ:
ಈ ಯೋಜನೆ ಪ್ರಗತಿಯಲ್ಲಿದ್ದು ಈಗಾಗಲೇ 23 ವಾರ್ಡುಗಳ ಸರ್ವೇ ಕಾರ್ಯಪೂರ್ಣಗೊಂಡಿರುತ್ತದೆ.ಪುರಸಭೆ ವ್ಯಾಪ್ತಿಯ ಆಸ್ತಿಗಳನ್ನು ಗುರುತಿಸಿ, ಆಸ್ತಿ ವಿವರಗಳನ್ನು ಸಂಗ್ರಹಿಸಿದ್ದು, ಮಾಹಿತಿಯನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ, ಸದ್ಯದಲ್ಲಿಯೇ ಗಣಕೀಕರಣಗೊಳಿಸಲಾಗುವುದು. ಶೀಘ್ರದಲ್ಲೇ ನಾಗರೀಕರು ಇದರ ಸೌಲಭ್ಯ ಪಡೆಯಬಹುದಾಗಿರುತ್ತದೆ..
ಸ್ಥಳೀಯ ಸಂಸ್ಥೆಯ ವೆಬ್ ಸೈಟ್ : ದೇವದುರ್ಗ ಪುರಸಭೆಯ ಅಧಿಕೃತ ವೆಬ್ ಸೈಟ್ : www.devadurgatown.gov.in ಸಾರ್ವಜನಿಕರಿಗೆ ಬೇಕಾದ ಕಛೇರಿ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ವೆಬ್ ಸೈಟ್ ಮೂಲಕ ಪಡೆದುಕೊಳ್ಳಬಹುದು.
This Web page is Maintained By Sri.Shripad , Chief Officer
Last Updated on : 19-02-2013

